Kannada Janapada Nighantu Vol-1 (KJU)
Karnataka Janapada University
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಅಂಕ
ಕೋಳಿ, ಟಗರು, ಗೂಳಿ ಮೊದಲಾದವುಗಳ ನಡುವೆ ಸ್ಪರ್ಧೆಗಾಗಿ ನಡೆಸುವ ಕಾಳಗ
ಬೇಸಾಯದ ಕೆಲಸ ಇಲ್ಲದ ದಿನಗಳಲ್ಲಿ ಶಿಕಾರಿ, ಕೋಳಿಅಂಕ ಇತ್ಯಾದಿಗಳು ಗಲಾಟೆ ಇರ್ತಾ ಇತ್ತು
ಅಂಕ
ಯುದ್ಧ
ಅಂಕದ ವೀರನಲ್ಲ ಸುಂಕದ ದಾಸನಲ್ಲ (ಗಾದೆ)
ಅಂಕ
ಹೆಸರುವಾಸಿ; ಪ್ರಸಿದ್ಧಿ
ಅಂಕದ ಆಲದಮರ ಬಿಂಕದ ಗೋಣಿ ಮರ
ಅಂಕಣ/ಅಂಕಳ/ಅಂಕ್ಲ
ಮನೆಯ ಎರಡು ಕಂಬ ಅಥವಾ ತೊಲೆಗಳ ನಡುವಿನ ಸ್ಥಳಾವಕಾಶ(ದಕ)
ಅಂಕಣ/ಅಂಕಳ/ಅಂಕ್ಲ
ತೇರನ್ನು ನಿರ್ಮಿಸುವಾಗ ಮಾಡಿಕೊಳ್ಳುವ ವಿಭಾಗ
ಒಂದನೆ ಅಂಕಣ, ಎರಡನೇ ಅಂಕಣ (ಬಳ್ಳಾಜಿ)
ಅಂಕಣ/ಅಂಕಳ/ಅಂಕ್ಲ
ಎಂಟರಿಂದ ಹತ್ತು ಅಡಿ ಉದ್ದಗಲದ ಜಾಗ
ಒಂದೇ ಅಂಕ್ಲಗ್ಲ ಒಂದೇ ಉದ್ದ ಇರೋವಂತಾ, ಒಂದೊಂದಕ್ಕೂ ಒಂದೊಂದ್ಗಾಕ್ಲು ಇರಂಗೆ ಒಂದ್ಮನೆ ಬೇಕು
ಅಂಕಣ/ಅಂಕಳ/ಅಂಕ್ಲ
ಮನೆಯ ಮುಂಬಾಗಿಲಿನ ಸ್ಥಳ, ಮೈದಾನ ಮೊದಲಾದವು
ಹೊರಗಿನ ಅಂಕಣದಲ್ಲಿ ದನಕರು ಕಟ್ತಾ ಇದ್ದರು
ಅಂಕದ ಕಳ
ಕೋಳಿಗಳ ಕಾದಾಟದ ಸ್ಪರ್ಧೆಗಾಗಿ ನಿಗದಿತವಾದ ಜಾಗ (ದಕ.ಜಿ)
ಅಂಕದ ಬಯಲು
ನೋಡಿ – ಅಂಕದ ಕಳ
ಅಂಕದೊಂಕ
(ನಾ)
ಅಂಕುಡೊಂಕು ; ವಕ್ರ
ಅಂಕದೊಂಕ
(ಗು)
ನೇರವಿಲ್ಲದ ; ನೆಟ್ಟಗಿಲ್ಲದ
ಅಂಕದೋರು
ಹೆಸರುವಾಸಿಯಾದವರು (ಹಾಸ. ಜಿ)
ಅಂಕಪರದೆ
ಆಟ ಪ್ರಾರಂಭವಾಗುವುದಕ್ಕಿಂದ ಮೊದಲು, ನಾಟಾಕದ ಅಂಕ ಮುಗಿದಾಗ, ಅಟ್ಟದ ಅಂಕಣವನ್ನು ಮರೆ ಮಾಡುವ ದೊಡ್ಡ ತೆರೆ; -ಮುಸುಕು ಬಟ್ಟೆ
ಅಂಕಪರದೆ ಬೀಳು
ಅಂತ್ಯಗೊಳ್ಳು; ಮುಕ್ತಾಯವಾಗು
ಅಂಕಬಿಂಕ ಹೊಡೆ
(ಕ್ರಿ)
ಬೆಡಗಿನ ಮಾತಾಡು; ಜಂಬದ ಮಾತಾಡು (ಶಿವ.ಜಿ)
ಅಂಕರ್ಕಾದ್ಗೆ
ಕಿರಿದಾದ ಕಾಲುವೆ; ಮಳೆಗಾಲದಲ್ಲಿ ಅಡಿಕೆ ಸಸಿ ಕುಣಿಯಲ್ಲಿ ನಿಂತ ನೀರು ಹರಿದು ಹೋಗಲೆಂದು ಸಸಿ ಕುಣಿಯಿಂದ ಕಾದ್ಗೆಗೆ ಮಾಡಿದ ಕಿರಿದಾದ ಕಾಲುವೆ (ಉಕ.ಜಿ)
ಅಂಕರ್ಕಾದ್ಗೆ
ಬಸಿಗಾಲುವೆ (ಮೈಸೂ.ಜಿ) ನೋಡಿ- ಕಾದ್ಗೆ
ಅಂಕರ್ಕಿ: ಅಂಕರಿಕೆ
ಬಾವಿಯೊಳಗೆ ಇಳಿಯಲು ಅನುಕೂಲ ವಾಗುವಂತೆ ನಿರ್ದಿಷ್ಟ ಅಂತರದಲ್ಲಿರುವ ಮೆಟ್ಟಿಲುಗಳು
ಅಂಕರ್ಕಿ: ಅಂಕರಿಕೆ
ಉರುಟು ಬಾವಿಯ ವೃತ್ತಾಕಾರದ ಮೆಟ್ಟಿಲು ಅಥವಾ ಅಂಕಣ (ದಕ.ಜಿ)
ಅಂಕಲು